Tuesday, March 11, 2008

ಕತ್ತಲು - ಬೆಳಕು - ವಿಷಾದ

ವಿಷಾದದ ವಿಷಮ ಗಳಿಗೆಯೊಳು
ಗಾಳಿಯಂತೆ ತೂರಿ ಹೋದ ಭಾವನೆಗಳಿಗೆ
ಹೊಸ ಭಾವ ನೀಡುವ ಬಯಕೆ.

ಕಾಣುವುದೇ ಹೊಸ ಚಿಗುರು,
ಕುಡಿಯೊಡೆಯುವುದೇ ಮೊಳಕೆ,
ಕಾತರದಿ ಕಾದಿದೆ ಮನವು.
ಕಾಣದ ಬಣ್ಣಗಳ ಅರಸಿ ಹೊರಟ
ಬದುಕು ಸಾಗಿದೆ ಎತ್ತ?

ಚಿತ್ತದಿ ಹೊಳೆದಿತ್ತು ಆ ಸುಂದರ
ಮುಂಜಾವಿನ ನೆನಹು...
ಮಂಜು ಮುಸುಕಿರಲು, ಮಾಸಿದ
ಮೋಡಗಳ ನಡುವಿಂದ
ಹೊರಹೊಮ್ಮಿದಾಗ ನೇಸರ
ಮಿನುಗಿತ್ತು ಧರೆ...

ಚರಿತ್ರ...

2 comments:

ಸುನಿಲ್ ಹೆಗ್ಡೆ said...

ಬದುಕಿನ ಬೆನ್ನೇರಿ ಹೊರಟಿರುವ ನಿನಗೆ ನನ್ನ ಶುಭಾಶಯ...
ಪ್ರಿತಿಯಿಂದ...
ಸುನಿಲ್ ಹೆಗ್ಡೆ..

Anonymous said...

ಚೆನ್ನಾಗಿದೆ...ಇನ್ನೂ ಹೆಚ್ಚಿನ ಪ್ರಯತ್ನ ಮುಂದುವರಿಸಿರಿ... ಶುಭಾಷಯಗಳು....
ಹರೀಶ್ ಕೆ. ಆದೂರು.